ಬಳ್ಳಾರಿ: 18 ಕೆಜಿ ಗಾಂಜಾ ವಶ

Advertisement

ಬಳ್ಳಾರಿ: ಜಿಲ್ಲಾ ಸೈಬರ್ ಪೊಲೀಸರು ಮತ್ತೊಂದು ಗಾಂಜಾ ಪ್ರಕರಣ ಭೇಧಿಸಿದ್ದು ಇಬ್ಬರನ್ನು ಬಂಧಿಸಿ, 18 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಾಹೀದ್, ಚಾಂದ್ ಬಾಷಾ ಬಂಧಿತರು. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ರೂಪನಗುಡಿ ರಸ್ತೆಯ ಮನೆಯೊಂದರಲ್ಲಿ ಗಾಂಜಾವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಸೈಬರ್ ಕ್ರೈಂ ವಿಭಾಗಕ್ಕೆ ಖಚಿತ ಮಾಹಿತಿ ಲಭ್ಯವಾಗಿತ್ತು ಎನ್ನಲಾಗಿದ್ದು, ಅದರ ಆಧಾರದಲ್ಲಿ ಸಿಬ್ಬಂದಿಯ ತಂಡದೊಂದಿಗೆ ದಾಳಿ ನಡೆಸಲಾಗಿತ್ತು.