ಭವ್ಯ ನಗರ ನಿರ್ಮಿಸಿದ ಅವರ ದೂರದೃಷ್ಟಿ ಎಲ್ಲರಿಗೂ ಮಾದರಿ: ಸಿಎಂ

ಪ್ರಗತಿಯಪ್ರತಿಮೆ
Advertisement

ಬೆಂಗಳೂರು: ಕೆಂಪೇಗೌಡ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿಯವರು ವಿಜಯನಗರ ಸಾಮ್ರಾಜ್ಯದ ಸುವರ್ಣಯುಗವನ್ನು ನಾಡಪ್ರಭು ಕೆಂಪೇಗೌಡರು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮರು ಸೃಷ್ಟಿಸಿದರು. ಕೆರೆಕಟ್ಟೆಗಳನ್ನು ಕಟ್ಟಿಸಿ, ವ್ಯಾಪಾರ-ವಹಿವಾಟಿಗೆ ಅನುಕೂಲವಾಗಲು ಪೇಟೆಗಳನ್ನು ನಿರ್ಮಿಸಿ, ಒಂದು ಜನ ವಸತಿಗೆ ಯೋಗ್ಯವಾದ ನಗರವನ್ನು ನಿರ್ಮಿಸಿದ ಅವರ ದೂರದೃಷ್ಟಿ ಎಲ್ಲರಿಗೂ ಮಾದರಿಯಾಗಿದೆ ಪ್ರಧಾನಿ ನರೇಂದ್ರ ಮೋದಿ ಕೈಯಲ್ಲಿ ಕೆಂಪೇಗೌಡ ಪ್ರತಿಮೆ ಅನಾವರಣ ದೈವಇಚ್ಛೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಆಧುನಿಕ ವಿಕಾಸ ಪುರುಷ ಮೋದಿ. ಬಲಿಷ್ಠ ಭಾರತವನ್ನು ಕಟ್ಟಿ ಎಲ್ಲರ ಅಭಿವೃದ್ದಿ ಮಾಡುತ್ತಿದ್ದಾರೆ ಎಂದರು.