ಸಜ್ಜನರ ಸಹವಾಸದ ಮಹತ್ವ

ಗುರುಬೋಧೆ
PRATHAPPHOTOS.COM
Advertisement

ಅಸಜ್ಜನಃ ಸಜ್ಜನ ಸಂಗಿ ಸಂಗಾತ್ ಕರೋತಿ ದುಸ್ಸಾಧ್ಯಮಪಿ ಸಾಧ್ಯಮ್|
ಪುಷ್ಪಾಶ್ರಯಾತ್ ಶಂಭು ಶಿರೋಧಿ ರೂಢಾ ಪಿಪಿಲಿಕಾ ಚುಂಬತಿ ಚಂದ್ರಮಂಡಲಮ್

ಎಷ್ಟು ಸುಂದರವಾಗಿ ಹೇಳಿದ್ದಾರೆ, ಸಜ್ಜನರ ಸಂಗವನ್ನು ಮಾಡಿ ಎನ್ನುತ್ತಾರೆ ಸಜ್ಜನರ ಸಂಗವನ್ನು ಮಾಡುವವರ ಸಂಗವನ್ನು ಮಾಡಿ ಎನ್ನುತ್ತಾರೆ. ಸಜ್ಜನರ ಸಂಗವು ಬಹಳ ದೊಡ್ಡವಿಚಾರ ಮನುಷ್ಯನಿಗೆ ಉತ್ತಮವಾದ ವಿವೇಕವನ್ನು ನೀಡುತ್ತದೆ, ತಪ್ಪು ಮಾಡಿದಾಗ ತಿದ್ದುವಂತಹ ಕೈ ಸದಾ ನಮ್ಮ ಮೇಲೆ ಇರುತ್ತದೆ. ಸಜ್ಜನರು ಸತ್ಕಾರ್ಯ ಮಾಡಲು ಪ್ರೇರಣೆ ಮತ್ತು ಪ್ರೋತ್ಸಾಹವನ್ನು ನೀಡುತ್ತಾರೆ. ಸಜ್ಜನರಿಂದ ನಮಗೆ ಆಗುವ ಲಾಭ ಅಸಂಖ್ಯವಾಗಿದೆ. ಧರ್ಮ ಅಧರ್ಮಗಳ ಬಗೆಗೆ ತಿಳಿವಳಿಕೆ ಕೊಡುತ್ತಾರೆ. ದೇವರ ಬಗೆಗೆ ತಿಳಿಸುತ್ತಾರೆ, ಕರ್ತವ್ಯವನ್ನು ಜೊತೆಗೆ ಮಾಡಬಾರದ ಕಾರ್ಯಗಳ ತಿಳಿವಳಿಕೆ ನೀಡುತ್ತಾರೆ. ನಮಗೆ ಯಾವುದು ಲಾಭ ಮತ್ತು ಯಾವುದು ಹಾನಿ ಅದರ ಬಗೆಗೆ ತಿಳಿ ಹೇಳುತ್ತಾರೆ. ಸಜ್ಜನರ ಸಂಗ ನೇರವಾಗಿ ದೊರಕದೇ ಹೋದರೂ ಆ ಸಜ್ಜನರ ಸಂಪರ್ಕದಲ್ಲಿರುವ ಅವರೊಂದಿಗೆ ಒಡನಾಟವಿರುವವರ ಸಂಗ ಮಾಡಿದರೂ ಸಾಕು ಅವರು ತಾವು ತಿಳಿದದ್ದನ್ನು ನಮಗೆ ಹೇಳುತ್ತಾರೆ. ಮಾರ್ಗದರ್ಶನ ಸಿಗುತ್ತದೆ. ದುರ್ಜನರ ಒಡನಾಟ ಮಾಡಬಾರದು ಸಜ್ಜನರ ಸಂಗ ಬಿಡಬಾರದು. ಸಜ್ಜನರ ಸಂಗದಿಂದ ಮಾರ್ಗದರ್ಶನ ಸಿಗುವುದು ಅಷ್ಟೇ ಅಲ್ಲ ಎಷ್ಟೋ ಅಸಾಧ್ಯವೆನಿಸುವ ಕಾರ್ಯಗಳನ್ನು ಮಾಡಬಹುದಾಗಿದೆ. ಇದಕ್ಕೆ ಬೇರೆ ಉದಾಹರಣೆ ಬೇಕಾಗಿಲ್ಲ ನಮ್ಮ ನಮ್ಮ ಜೀವನವನ್ನು ಒಮ್ಮೆ ಅವಲೋಕಿಸಿಕೊಂಡಾಗ ತಿಳಿಯುತ್ತದೆ. ಸಜ್ಜನರ ಸಂಗದಿಂದ ಏನೂ ತಿಳಿಯದೇ ಶೂನ್ಯದಿಂದ ಆರಂಭಿಸಿ ಅಕ್ಷರ ಜ್ಞಾನದಿಂದ ಆರಂಭಿಸಿ ಶ್ಲೋಕಗಳು ಶಾಸ್ತ್ರದ ಜ್ಞಾನಯಜ್ಞ ಯಾಗಾದಿಗಳನ್ನು ಮಂಗಳಗಳನ್ನು ಮಾಡಿ ಪಂಡಿತರು ಎನಿಸುವುದು ಸಜ್ಜನರ ಸಂಗ ಮಾಡಿದುದರಿಂದಲೇ ಇದರಿಂದ ದೊಡ್ಡ ಸ್ಥಾನವನ್ನು ಪಡೆಯುತ್ತಾರೆ. ಸಂಪತ್ತಾಗಲಿ ಜ್ಞಾನವಾಗಲಿ ಇದ್ದಕ್ಕಿದ್ದಂತೆ ಬಂದರೆ ಒಮ್ಮೊಮ್ಮೆ ಅಹಂಕಾರ ಬಂದು ಬಿಡುತ್ತದೆ. ಹಂತ ಹಂತವಾಗಿ ಬೆಳೆಯಬೇಕು. ಲಕ್ಷ್ಮಿ ದೇವಿಯನ್ನು ಕೂಡ ಪುರಂದರದಾಸರು ಹೆಜ್ಜೆಯ ಮೇಲೊಂದು ಹೆಜ್ಜೆಯನಿಕ್ಕುತ ಭಾಗ್ಯದ ಲಕ್ಷ್ಮಿ ಬಾರಮ್ಮ ಎಂದು ಕರೆಯುತ್ತಾರೆ. ಒಂದೇ ಬಾರಿ ಓಡಿ ಅಥವಾ ಹಾರಿ ಬಂದು ಕೂಡ ಬೇಡ ಹೆಜ್ಜೆಯ ಮೇಲೊಂದು ಹೆಜ್ಜೆಯನ್ನಿಡುತ್ತಾ ನಿಧಾನವಾಗಿ ಬಾ ಎನ್ನುತ್ತಾರೆ. ಲಕ್ಷ್ಮಿ ದೇವಿಗೆ ನಾವು ಪ್ರಾರ್ಥನೆ ಮಾಡುವಾಗ ನಿಧಾನವಾಗಿ ಸ್ವಲ್ಪ ಸ್ವಲ್ಪ ಧನವು ನಮ್ಮಲ್ಲಿ ಬರಲಿ ನಮ್ಮ ಶ್ರಮಕ್ಕೆ ತಕ್ಕಂತೆ ಏಳಿಗೆಯನ್ನು ಕೊಡು ಎಂದು ಪ್ರಾರ್ಥಿಸಬೇಕು. ಕಷ್ಟಪಟ್ಟು ದುಡಿದು ಬಂದ ಹಣದಿಂದ ಅಹಂಕಾರ ಮೂಡುವುದಿಲ್ಲ. ಹಂತ ಹಂತವಾಗಿ ಬಂದ ಜ್ಞಾನವು ಮನುಷ್ಯನಲ್ಲಿ ವಿನಮ್ರತೆಯನ್ನು ಕಲಿಸಿರುತ್ತದೆ.
ಸಜ್ಜನರ ಸಹವಾಸದಿಂದ ಇಂತಹ ಗುಣಗಳು ನಮ್ಮ ಬರುತ್ತವೆ, ಇದಕ್ಕೆ ಉದಾಹರಣೆ ಇರುವೆ ಚಂದ್ರ ಮಂಡಲವನ್ನು ಮುಟ್ಟಲು ಸಾಧ್ಯವಿಲ್ಲ. ಆದರೆ ಇರುವೆ ಅತೀ ಸುಲಭವಾಗಿ ಚಂದ್ರಲೋಕಕ್ಕೆ ಹೋಗಿ ಅವನಿಗೆ ಚುಂಬನವನ್ನು ಮಾಡಬಹುದು ಅದು ಹೇಗೆಂದರೆ ಸಜ್ಜನರಾದ ರುದ್ರದೇವರು ತಲೆಯಮೇಲೆ ಚಂದ್ರನನ್ನು ಕೂಡಿಸಿಕೊಂಡಿದ್ದಾರೆ. ರುದ್ರದೇವರು ಪರಮಶ್ರೇಷ್ಠರಾದ ಸಜ್ಜನರು ಅವರ ಸಂಗ ಮಾಡಿದ ಒಂದು ಪುಷ್ಪದಲ್ಲಿ ಕುಳಿತ ಇರುವೆಯು ಚಂದ್ರನ ಬಳಿ ಹೋಗುತ್ತದೆ. ಅಂದರೆ ರುದ್ರದೇವರ ಸಂಗ ಮಾಡಿದ ಹೂವಿನ ಮೂಲಕ ಆ ಹೂವಿನಲ್ಲಿ ಕುಳಿತಿದ್ದ ಇರುವೆಯೂ ಕೂಡ ಚಂದ್ರನ ಬಳಿ ಹೋಗುವಷ್ಟು ಅದೃಷ್ಟ ಪಡೆದು ಕೊಂಡಿತು.
ಮಾನವರಿಗೆ ಹೋಗಲು ಸಾಧ್ಯವಿರದ ಕೆಲಸವು ಇರುವೆಗೆ ದೊರೆತಿದ್ದು ಅದು ಮಾಡಿದ ಕುಸುಮದ ಸಹವಾಸದಿಂದ. ನೆಲದ ಮೇಲಿರುವ ಇರುವೆಗೆ ಮನೆಯ ಅಟ್ಟದ ಮೇಲೆ ಎರುವುದು ಕಷ್ವವೇ ಆದರೂ ಹೂವಿನ ಸಹವಾಸದಿಂದ ಚಂದ್ರ ಲೋಕವನ್ನು ತಲುಪಬಹುದು ಎಂದು. ಈ ಕಲ್ಪನೆಯಿಂದ ತಿಳಿಸುವುದು ಏನೆಂದರೆ ಸಜ್ಜನರ ಸಹವಾಸ ಅಥವಾ ಸಜ್ಜನರ ಸಂಗ ಮಾಡಿದವರ ಸಹವಾಸದಿಂದ ಹೂವಿನೊಡನೆ ನಾರು ಮಾತ್ರವಲ್ಲದೇ ಇರುವೆಯೂ ಕೂಡ ಸ್ವರ್ಗ ಅಷ್ಟೇ ಅಲ್ಲ ಚಂದ್ರನ ಬಳಿಯೂ ಹೋಗಬಹುದು. ಸಜ್ಜನರ ಸಹವಾಸದಿಂದ ಅನೇಕ ಅಸಾಧ್ಯವಾದವುಗಳನ್ನು ಸಾಧಿಸಬಹುದು ಎಂದು ಹೇಳುತ್ತಾರೆ.

ಗುರುಬೋಧೆ