ಮಹಾರಾಷ್ಟ್ರ ಸರ್ಕಾರಕ್ಕೆ ಬಿಗ್ ಶಾಕ್

Advertisement

ಅಕ್ಕಲಕೋಟ ತಾಲೂಕಿನ 44 ಗ್ರಾಮಗಳ ಜನ ಕರ್ನಾಟಕ ಸೇರುವ ಇಂಗಿತ – ಗ್ರಾಮ ಮಂಡಲ ಠರಾವು ಪಾಸ್ ಮಾಡಿದ ಜನ ….

ವಿಜಯಪುರ : ಸದಾ ಕರ್ನಾಟಕ ಪ್ರದೇಶಗಳ ಮೇಲೆ ಕಣ್ಣಿಟ್ಟು ಕ್ಯಾತೆ ತೆಗೆಯುವ ಮಹಾರಾಷ್ಟ್ರಕ್ಕೆ ಅಲ್ಲಿನ ಗ್ರಾಮಸ್ಥರೇ ಶಾಕ್ ನೀಡಿದ್ದು, ಕರ್ನಾಟಕ – ಮಹಾರಾಷ್ಟ್ರ ಗಡಿಯಲ್ಲಿರುವ ಮಹಾರಾಷ್ಟ್ರದ ಹಲವು ತಾಲೂಕುಗಳ ಜನ ಕರ್ನಾಟಕ ಸೇರಲು ನಿರ್ಧಾರ ಮಾಡಿದ್ದಾರೆ.

ಕನ್ನಡಿಗರೇ ಹೆಚ್ಚು ವಾಸವಾಗಿರುವ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ್ ತಾಲೂಕಿನ 44 ಕ್ಕೂ ಅಧಿಕ ಗ್ರಾಮಗಳ ಜನರು ಕರ್ನಾಟಕ ಸೇರುವ ನಿರ್ಧಾರ ಮಾಡಿ ಮಹಾ ಸರ್ಕಾರಕ್ಕೆ ದೊಡ್ಡ ಶಾಕ್ ನೀಡಿದ್ದಾರೆ.

ಮಹಾರಾಷ್ಟ್ರದಿಂದ ನಮಗೆ ಅನ್ಯಾಯವಾಗಿದೆ. ಕನ್ನಡಿಗರು ಹೆಚ್ಚು ವಾಸವಾಗಿರುವ ಗ್ರಾಮ ತಾಲೂಕಗಳಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಕನ್ನಡಿಗರಿರುವ ಕಾರಣಕ್ಕೆ ತಾರತಮ್ಯ ನೀತಿ ಅನುಸರಿಲಾಗುತ್ತಿದೆ. ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಕನ್ನಡಿಗರು ತಮ್ಮ ತಮ್ಮ ಗ್ರಾಮಗಳ ಮಂಡಲಗಳಲ್ಲಿ ಕರ್ನಾಟಕ ಸೇರುವ ನಿರ್ಧಾರದ ಠರಾವು ಪಾಸ್ ಮಾಡಿದ್ದು ನಮ್ಮನ್ನು ಕರ್ನಾಟಕ ಸೇರಿಸಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.