ಕಾರಿಡಾರ್‌ಗೆ ಭೂಸ್ವಾಧೀನ ವಿರೋಧಿಸಿ ರೈತರಿಂದ ಧರಣಿ

ದರಣಿ
Advertisement

ಬ್ಯಾಡಗಿ: ಕೈಗಾರಿಕಾ ಕಾರಿಡಾರ್‌ಗೆ ಭೂಸ್ವಾಧೀನ ವಿರೋಧಿಸಿ ಬ್ಯಾಡಗಿ ತಾಲೂಕು ಮೋಟೆಬೆನ್ನೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರೈತರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸವಾರರ ಪರದಾಟ. ಪರ್ಯಾಯ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿರುವ ಪೊಲೀಸರು. ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ನಿರ್ಧರಿಸಿರುವ ರೈತರು. ಸ್ಥಳದಲ್ಲೇ ಊಟ, ಉಪಾಹಾರ ಸಿದ್ದತೆ ಮಾಡಲಾಗಿದೆ.
ಪ್ರತಿಭಟನೆಯಲ್ಲಿ ರೈತ ಮುಖಂಡ ರುದ್ರಗೌಡ ಕಾಡನಗೌಡ್ರ ಮಾತನಾಡಿ, ಹಸಿವಿನ ವಿಷವನ್ನು ಕಳೆಯುದು ಅನ್ನ, ಆದರೆ ಅನ್ನ ಕೊಡುವ ರೈತನ ಮನೆಗೆ ಕನ್ನ ಹಾಕುತ್ತಿರುವುದು ಏಷ್ಟರಮಟ್ಟಿಗೆ ಸರಿ..? ಕ್ಷೇತ್ರದ ಶಾಸಕರ ಸಚಿವರ ಹಾಗೂ ರೈತರ ಗಮನಕ್ಕೆ ತರದೇ ಭೂಸ್ವಾಧೀನ ತಿದ್ದುಪಡಿ ವಿಧೇಯಕವನ್ನು ತಂದಿರುವುದು ಯಾವ ಪುರುಷಾರ್ಥಕ್ಕಾಗಿ. ರೈತ ದೇಶದ ಬೆನ್ನೆಲುಬು ಎಂದು ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿತ್ತಾರೆ. ಬಳಿಕ ರೈತನ ಸಮಾದಿಯನ್ನು ಕಟ್ಟಲು ಮುಂದಾಗುತ್ತಾರೆ. ನಮ್ಮ ಭೂಮಿ ನಮ್ಮ ಹಡೆದ ತಾಯಿ ಇದ್ದಂತೆ. ನಮ್ಮ ಜೀವ ಹೋದರು ಪರವಾಗಿಲ್ಲ ಒಂದಿಂಚು ಭೂಮಿಯನ್ನು ಕೊಡುವುದಿಲ್ಲ.
ಸರ್ಕಾರರಕ್ಕೆ ನಾಚಿಕೆಯಾಗಬೇಕು. ಗುಡ್ಡ ಅರಣ್ಯ ಪ್ರದೇಶ ಇಲ್ಲವೇ…? ಇವರಿಗೆ ನಮ್ಮ ಭೂಮಿನೇ ಬೇಕಾ…?
ಪಿಎಸ್ಐ ಹುದ್ದೆಗೆ ಕೋಟಿ ಕೋಟಿ ಲಂಚ ಪಡೆಯುತ್ತಾರೆ. ಇಂತವರು ನಮ್ಮ ಮಕ್ಕಳಿಗೆ ಏನು ನೌಕರಿ ಕೊಡತಿರಿ ಸ್ವಾಮಿ….. ತಾಕತಿದ್ದರೆ ಒಂದು ಅಕ್ಕಿ ಕಾಳು ಜೋಳದ ಕಾಳು ಉತ್ಪಾದನೆ ಮಾಡಿ ನೋಡೋಣ ಗಂಡ ಹೆಂಡಿರ ನಡುವೆ ಜಗಳ ಹಚ್ಚಿ ರಾಜಕೀಯ ಮಾಡುವವರೆ ತಿಳಿದುಕೊಳ್ಳಿ.. ನಮ್ಮ ಅನ್ನ ನಮ್ಮ ರೊಟ್ಟಿ ತಿನ್ನೊದಿಲ್ಲ. ನಿಮನ್ನು ಕೆಳಗಿಳಿಸುವ ಶಕ್ತಿ ರೈತರಿಗಿದೆ. ರೈತನ ರೊಟ್ಟಿಯನ್ನು ಕಸಿದುಕೊಂಡವರಿಗೆ ಏನೆನ್ನಬೇಕು….?
ನಾಗರಾಜ ಆನ್ವೇರಿ ಮಾತನಾಡಿ, ಭೂಮಿಯ ಮೇಲಿರುವ ಮನುಷ್ಯ ಸೇರಿದಂತೆ ಎಲ್ಲ ಪ್ರಾಣಿಗಳಿಗೆ ಅನ್ನ ನೀಡುವ ರೈತನ ಭೂಮಿಯನ್ನು ಕನ್ನ ಹೊಡೆಯಲು ಬಂದಿರುವ ನೀವು ಹಿಂದೆ ಹೋಗಿ. ಇಲ್ಲವಾದಲ್ಲಿ ಮುಂದೆ ಭಿಕ್ಷೆ ಬೇಡುವ ಸಂದರ್ಭ ಬರುವುದು ಖಚಿತ. ನಿಮ್ಮ ರೊಕ್ಕ ಯಾರಿಗೆ ಬೈಕ್ರಿ.
ನ್ಯಾಯವಾದಿ ಪ್ರಕಾಶ ಬನ್ನಹಟ್ಟಿ ಮಾತನಾಡಿ, ಶಾಸಕರು ರಾಜಿನಾಮೆ ಕೊಡುತ್ತೆನೆ ಎಂಬ ವಿಚಾರ ಸಮಂಜಸವಲ್ಲ. ಭೂಸ್ವಾಧೀನ ಕಾಯ್ದೆ ಜಾರಿಗೆ ತರಲು ವರ್ಷವೇ ಗತಿಸುತ್ತದೆ. ಆದರೆ ಶಾಸಖರಿಗೆ ತಿಳಿಯದೇ ಇರುವುದು ಹಾಶ್ಯಾಸ್ಪದ. ಶಾಸಕರ ರಾಜಿನಾಮೆ ನೀಡುವುದನ್ನು ಬಿಟ್ಟು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಫಲವತ್ತಾದ ಬರಡು ಹಾಗೂ ಜವಳು ಭೂಮಿಯಲ್ಲಿ ನಿಮ್ಮ ಕಾರಿಡಾರ್ ಯೋಜನೆಯನ್ನು ಮಾಡಿ.
ಪಿ.ಟಿ.ಲಕ್ಕಣ್ಣನವರ, ಮುಂದೆ ಆಗುವ ಆಹಾರ ಕ್ಷಾಮದ ಕುರಿತು ದೆಹಲಿ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಈಗಾಗಲೇ ಎಚ್ಚರಿಕೆ ಕೊಟ್ಟಿದೆ. ರಾಜ್ಯ ಹಾಗೂ ರಾಷ್ಟ್ರ ನಾಯಕರು ಯಾರಿಗೂ ತಿಳಿಯದಂತೆ ಪಗಾರ ಹೆಚ್ಚು ಮಾಡಿಕೊಳ್ಳುತ್ತಾರೆ. ಅಲ್ಲದೇ ಸಾವಿರಾರು ಎಕರೆ ಭುಮಿಯನ್ನೂ ಮಾಡಿಕೊಂಡು ಕಾಪಿ ತೋಟ ಮಾಡಿಕೊಂಡು ಅರಾಮಾಗಿರಿತ್ತಾರೆ. ಆದರೆ ರೈತರಿಗೆ ಮಾರಕವಾದ ಯೋಜನೆಯನ್ನು ತಂದು ರೈತನ ಕಣ್ಣಲ್ಲಿ ನೀರು ಹರಿಸುತ್ತಾರೆ.
ಭೂಮಿಯನ್ನು ಕಳೆದುಕೊಂಡು ರೈತರಿಗೆ ಮನವೋಲಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಸ್ವಾಮಿ ಇಂತ ಕೆಲಸಕ್ಕೆ ಕೈಹಾಕಬೇಡಿ. ಯಾರು ಒಂದಿಂಚು ಭೂಮಿಯನ್ನು ಕೊಡುವುದಿಲ್ಲ. ಅನ್ನ ಕಸಿಯುವ ಮುನ್ನ ಯೋಚನೆ ಮಾಡಬೇಕು.


ಹಾನಗಲ್ಲ ತಾಲೂಕಾಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ದಕ್ಷತೆಯಿಂದ ಶಾಸಕರು ಮೇಲ್ಮಟ್ಟದಲ್ಲಿ ಹೋರಾಟ ಮಾಡಿಕೊಂಡು ಭೂಸ್ವಾಧೀನಕ್ಕೆ ಒಳಪಟ್ಟ ಯೋಜನೆಯನ್ನು ರದ್ದು ಮಾಡಿಸಿಕೊಂಡು ಬರಬೇಕು.
ಹಸಿರು ಸೇನೆ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ನಮ್ಮ ಭೂಮಿಯನ್ನು ಕೊಟ್ಟರೆ ಅರ್ಧ ಊರೇ ಗುಳೆ ಹೋಗುವ ಸಂದರ್ಭ ಬರುತ್ತದೆ. ನಿಮ್ಮ ರೊಕ್ಕ ನಮಗೆ ಬೇಡ. ನಮ್ಮ ರೊಕ್ಕ ಆದಾವು.
ಸುಮಾರು5 ಸಾವಿರ ಎಕರೆ ಸರ್ವೇ ಕಾರ್ಯ ನಡೆದಿದೆ. ಜೀವ ಬಿಡತವಿ ಭೂಮಿ ಬಿಡಲ್ಲ.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ತಾಲುಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ, ಮರಿಗೌಡ್ರ ಪಾಟೀಲ, ಗಂಗಣ್ಣ ಎಲಿ, ನಾಗರಾಜ ಆನ್ವೇರಿ, ನಿಂಗಪ್ಪ ಅಂಗಡಿ, ನವೀನ ಬಳ್ಳಾರಿ, ಮಂಜುನಾಥ್ ಕದಂ, ವೀರಯ ಹಿರೇಮಠ, ಕೆ.ವಿ.ದೊಡ್ಡಗೌಡ್ರ, ಕಿರಣಕುಮಾರ ಗಡಿಗೋಳ, ವಿಜಯಭರತ ಬಳ್ಳಾರಿ, ಡಾ.ಪ್ರೇಮಾನಂದ ಲಕ್ಕಣ್ಣವರ, ಮಂಜು ತೋಟದ, ಮಾರುತಿ ಬ್ಯಾಟಪ್ಪನವರ ಸ್ವರಚಿತ ಜಾನಪದ ಹಾಡನ್ನು ಹೇಳುವ ಮೂಲಕ ರೈತರ ಕಣ್ಣಾಲೆಗಳು ತೇವಗೊಂಡವು.