ದರ್ಗಾ ತೆರವು ಕಾರ್ಯಾಚರಣೆ ಪೂರ್ಣ

Advertisement

ಹುಬ್ಬಳ್ಳಿ: ಇಲ್ಲಿಯ ಭೈರಿದೇವರಕೊಪ್ಪದ ಸಾರ್ವಜನಿಕ ಸ್ಥಳದಲ್ಲಿದ್ದ ಹಜರತ್ ಸೈಯದ್ ಮೆಹಮೂದ್ ಶಾ ಖಾದ್ರಿ ದರ್ಗಾದ ತೆರವು ಕಾರ್ಯಾಚರಣೆ ಗುರುವಾರ ಬೆಳಿಗ್ಗೆ 5 ಗಂಟೆಗೆ ಸಂಪೂರ್ಣವಾಗಿ ಮುಗಿದಿದೆ.
ದರ್ಗಾದ ಸುತ್ತಮುತ್ತಲಿನ ಪ್ರಾರ್ಥನಾ ಮಂದಿರ, ವಾಣಿಜ್ಯ ಮಳಿಗೆ ಸೇರಿದಂತೆ ಕಂಪೌಂಡನ್ನು ಬುಧವಾರ ಮಧ್ಯಾಹ್ನವೇ ತೆರುವುಗೊಳಿಸಲಾಗಿತ್ತು. ಆದರೆ ಅಂಜುಮನ್ ಸಂಸ್ಥೆಯವರು ದರ್ಗಾದಲ್ಲಿದ್ದ ಗೋರಿಗಳಿಗೆ ಯಾವುದೇ ಧಕ್ಕೆಯಾಗದಂತೆ ಸ್ವಯಂ ಪ್ರೇರಿತವಾಗಿ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಅನುಮತಿ ನೀಡಿದ್ದರು.
ಬಳಿಕ ಅಂಜುಮನ್ ಸಂಸ್ಥೆಯ ನುರಿತ ಎಂಜಿನಿಯರ್ ತಜ್ಞರ ಸಲಹೆ ಪಡೆದು ವಿವಿಧ ಆಧುನಿಕ ಯಂತ್ರೋಪಕರಣಗಳನ್ನು ಬಳಿಸಿಕೊಂಡು ಕಾರ್ಯಾಚರಣೆ ಮುಂದುವರಿಸಿದರು. ಹಜರತ್ ಸೈಯ್ಯದ್ ಮಹ್ಮದ್ ಶಾ ಖಾದ್ರಿ ಅವರ ಗೋರಿ‌ 10- 10 ಉದ್ದ ಅಗಲವಿದ್ದು, ಅವರ ಇಬ್ಬರು ಶಿಷ್ಯಂದಿರ ಗೋರಿ 7-7 ಉದ್ದ-ಅಗಲವಿದೆ. ಇವುಗಳಿಗೆ ಧಕ್ಕೆ ಆಗದ ಹಾಗೆ ಯಥಾವತ್ತಾಗಿ ತೆರವುಗೊಳಿಸಿ ಸಮುದಾಯದ ಮುಖಂಡರ ಸಮ್ಮುಖದಲ್ಲಿ ವಿಧಿ ವಿಧಾನಗಳ ಮೂಲಕ ದರ್ಗಾ ಹಿಂದೂಗಡೆ ಜಾಗದಲ್ಲಿ ಸ್ಥಳಾಂತರಿಸಿದ್ದಾರೆ. ಬಿಆರ್‌ಟಿಎಸ್‌ ಯೋಜನೆ ಅನುಷ್ಠಾನಕ್ಕಾಗಿ ಐತಿಹಾಸಿಕ ದರ್ಗಾ ತೆರುವು ಮಾಡಿದ್ದರಿಂದ ಮುಸ್ಲಿಂ ಅಷ್ಟೇ ಅಲ್ಲದೇ ಹಿಂದು ಸಮುದಾಯದವರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.