ಜನಾರ್ಧನರೆಡ್ಡಿ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಸಮಸ್ಯೆ: ಸಿ.ಎಂ ಇಬ್ರಾಹಿಂ

ಇಬ್ರಾಹಿಂ
Advertisement

ರಾಯಚೂರು: ಮಾಜಿ ಸಚಿವ ಜನಾರ್ಧನರೆಡ್ಡಿ ಅವರ ನೂತನ ಪಕ್ಷ ಸ್ಥಾಪನೆಯಿಂದ ಬಿಜೆಪಿಗೆ ಸಮಸ್ಯೆ ಆಗಲಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಭವಿಷ್ಯ ನುಡಿದರು.
ಮಾನ್ವಿ ಪಟ್ಟಣದಲ್ಲಿ ಬುಧವಾರ ನಡೆಯುತ್ತಿರುವ ಶಾಸಕ ರಾಜಾವೆಂಕಟಪ್ಪ ನಾಯಕ ಅವರ ಸಹೋದರ ಮದುವೆ ಸಮಾರಂಭಕ್ಕೆ ತೆರಳಲು ನಗರದಲ್ಲಿ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಜರ್ನಾರ್ಧನರೆಡ್ಡಿ ಹೊಸ ಪಕ್ಷದಿಂದ ಬಿಜೆಪಿಗೆ ಡ್ಯಾಮೇಜ್, ಜೆಡಿಎಸ್‌ಗೆ ಏನೂ ಆಗೊಲ್ಲ ಕರ್ನಾಟಕ ಆಂಧ್ರ ಗಡಿ ಸೇರಿಸಿ ಜನಾರ್ಧನರೆಡ್ಡಿ ಪಕ್ಷ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು. ದೇಶದಲ್ಲಿ ಅಧಿಕಾರ ಇಲ್ಲದ ಸಿಎಂ ಯಾರಾದರೂ ಇದ್ದರೆ ಅದು ಸಿಎಂ ಬಸವರಾಜ ಬೊಮ್ಮಾಯಿ. ಆರ್ ಎಸ್ ಎಸ್ ಅಣತಿಯಂತೆ ಬೊಮ್ಮಾಯಿ ಆಡಳಿತ ನಡೆಸುತಿದ್ದಾರೆ ಎಂದು ಟೀಕಿಸಿದರು. ಕೋವಿಡ್ ಹೆಸರಿನಲ್ಲಿ ಮತ್ತೆ ಹಣ ಲೂಟಿ ಮಾಡಲು ಹೊರಟಿದ್ದಾರೆ,ಸತ್ತವರ ಹೆಸರಿನಲ್ಲಿ ದುಡ್ಡು ತಿಂದ ಸರ್ಕಾರವಾಗಿದೆ. ಜೆಡಿಎಸ್ ಯಾತ್ರೆ ನಿಲ್ಲಿಸಲು ಕೋವಿಡ ನೆಪ ಎಂದು ದೂರಿದರು. ಹೊಸ ವರ್ಷಾಚರಣೆ ವೇಳೆ ಮದ್ಯಪ್ರಿಯರನ್ನ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ವಿಚಾರ ವಿಧಾನಸಭೆಯಲ್ಲಿ ಹಲವರು ಅಂತವರಿದ್ದಾರೆ. ಅವರಿಗಾಗಿ ಆಂಬ್ಯಲೆನ್ಸ್ ವ್ಯವಸ್ಥೆ ಮಾಡಿರಬಹುದು ಎಂದು ವ್ಯಂಗ್ಯವಾಡಿದರು. ಕರ್ನಾಟಕದ ಕೆಲವು ಊರುಗಳು‌ ಮಹಾರಾಷ್ಟ್ರ ಕ್ಕೆ ಸೇರಬೇಕೆಂಬ ನಿರ್ಧಾರ ಚುನಾವಣೆ ಸಮಯ ಆಗಿದ್ದರಿಂದ ಬಿಜೆಪಿಯವರು‌ ಮಾಡಿಸುತ್ತಿದ್ದಾರೆ. ಅವರಿಗೆ ಯಾವುದೇ ವಿಷಗಳು ಇಲ್ಲ ಅದಕ್ಕಾಗಿ ಗಡಿ ವಿಚಾರಕ್ಕೆ ಕೈ ಹಾಕಿದ್ದಾರೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆಪಾದಿಸಿದರು ತೆಲಂಗಾಣದ ಸಿಎಂ ಬಿ ಆರ್ ಎಸ್ ಜೊತೆ ವಿಧಾನಸಭೆಯ ಮೈತ್ರಿ ಬಗ್ಗೆ.ಲೋಕಸಭೆಯಲ್ಲಿ ಮೈತ್ರಿ ಆಗಲಿದೆ, ಪ್ರಾದೇಶಿಕ ಪಕ್ಷಗಳು ಒಂದಾಗಿ ರಾಷ್ಟ್ರೀಯ ಶಕ್ತಿ ಹುಟ್ಟು ಹಾಕಲಾಗುವುದು ಎಂದು ತಿಳಿಸಿದರು.