ಕೊಟ್ಟ ಸಮಯದಲ್ಲಿ ಭಾಷಣ ಮುಗಿಯದಿದ್ದರೆ ಮೈಕ್ ಬಂದ್

Advertisement

ಹಾವೇರಿ: ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ನಡೆಯಬೇಕು ಎಂಬ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಹೌದು ಸಮಯಕ್ಕೆ ಸರಿಯಾಗಿ ಗೋಷ್ಠಿಗಳು ನಡೆಯಬೇಕು ಎಂಬ ನಿಟ್ಟಿನಲ್ಲಿ ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಗಳಿಗೆ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಶುರುವಾಗುವುದು ಕಡಿಮೆ, ಬೆಳಗಿನ ಗೋಷ್ಠಿ ಮಧ್ಯಾಹ್ನ, ಮಧ್ಯಾಹ್ನದ್ದು ಸಂಜೆ ನಡೆಯುತ್ತದೆ ಎಂಬ ಟೀಕೆಗಳಿಂದ ತಪ್ಪಿಸಿಕೊಳ್ಳಲು ಸಮ್ಮೇಳನದಲ್ಲಿ ಮಹತ್ವ ಕೊಡಲಾಗಿದೆ.
ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ಅತಿಥಿಗಳ ಭಾಷಣದ ಸಮಯದಲ್ಲಿ ವ್ಯತ್ಯಾಸವಾದಲ್ಲಿ ಸ್ವಯಂಚಾಲಿತವಾಗಿ ಮೈಕ್ ಬಂದ್ ಆಗಲಿದೆ. ಇದಕ್ಕಾಗಿ ಕಸಾಪ ವ್ಯವಸ್ಥಿತ ಸಮಯ ಪಾಲಿಸಲು ಸಿದ್ಧತೆ ಮಾಡಿಕೊಂಡಿದೆ. ಪ್ರತಿ ನಿಮಿಷ, ಸೆಕೆಂಡಿಗೂ ಮಹತ್ವ ನೀಡಲಾಗಿದೆ.