ಸಿನಿಮೀಯ ರೀತಿಯಲ್ಲಿ ಹಲ್ಲೆ ನಡೆಸಿದ ಸಾಮಿಲ್ ಮಾಲಿಕ

Advertisement

ಬಾಗಲಕೋಟೆ: ಅನಧಿಕೃತವಾಗಿ ನಡೆಸುತ್ತಿದ್ದ ಸಾಮಿಲ್ ಬಗ್ಗೆ ಪರಿಶೀಲನೆಗೆ ತೆರಳಿದ ಅಧಿಕಾರಿಗಳ ಮೇಲೆ ಸಿನಿಮೀಯ ರೀತಿಯಲ್ಲಿ ಹಲ್ಲೆ ನಡೆದ ಘಟನೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಜಗದಾಳ ಗ್ರಾಮದ ಅರಣ್ಯ ಪ್ರದೇಶ ಜಾಗೆಯಲ್ಲಿ ನಡೆಸುತ್ತಿದ್ದ ಸಾಮಿಲ್‌ನಲ್ಲಿ ಪರವಾನಿಗೆಯಿಲ್ಲದೆ ಕಟ್ಟಿಗೆ ಕೊರೆಯುವ ಯಂತ್ರ ಬಳಕೆಯ ಬಗ್ಗೆ ತಾಲೂಕಾ ಅರಣ್ಯಾಧಿಕಾರಿ ಪವನುಕುಮಾರ್ ಕೆ, ಮಲ್ಲಿಕಾರ್ಜುನ ನಾವಿ ಸೇರಿದ 10 ಜನರ ತಂಡದ ಮೇಲೆ ಸಾಮಿಲ್ ಮಾಲಿಕರು ಹಾಗೂ ಕಾರ್ಮಿಕರಿಂದ ಒಟ್ಟು ನಾಲ್ವರಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಡೆದಿದ್ದೇನು?: ಕಳೆದ ಶನಿವಾರದಂದು ಖಚಿತ ಮಾಹಿತಿ ಪ್ರಕಾರ ಜಗದಾಳ ಗ್ರಾಮದಲ್ಲಿನ ಸಾಮಿಲ್‌ನಲ್ಲಿ ಪರವಾನಿಗೆಯಿಲ್ಲದೆ ಕಟ್ಟಿಗೆ ಕೊರೆಯುವ ಬಗ್ಗೆ ಮಾಹಿತಿಯಿತ್ತು.
ಈ ಕುರಿತು ಅರಣ್ಯ ಸಿಬ್ಬಂದಿ ವಿಡಿಯೋ ಚಿತ್ರೀಕರಣ ಮಾಡುತ್ತಿರುವ ಸಂದರ್ಭ ಸಾಮಿಲ್ ಮಾಲಿಕ ಮಹಾದೇವ ಗಾಂಜಾಗೋಳ ಹಾಗೂ ಸಹೋದರ ಮುತ್ತಪ್ಪ ಗಾಂಜಾಗೋಳ, ಕಾರ್ಮಿಕರಾದ ರಾಜು ಹಾದಿಮನಿ ಹಾಗು ಶ್ರೀಕಾಂತ ಗಿಡ್ಡನವರರಿಂದ ಅಧಿಕಾರಿ ಹಾಗು ಸಿಬ್ಬಂದಿ ಮೇಲೆ ಕಟ್ಟಿಗೆಯಿಂದ, ಯಂತ್ರೋಪಕರಣ ಸಾಮಗ್ರಿ, ಸೀಮೆಎಣ್ಣೆ ಸುರಿಯುವದು ಹೀಗೆ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ ಘಟನೆ ನಡೆಯಿತು.
ಘಟನೆ ಕುರಿತು ಮಾಹಿತಿ ದೊರೆತ ಬನಹಟ್ಟಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.