ಮೀಸಲಾತಿಗೆ ಆಗ್ರಹಿಸಿ 13ರಂದು ಸಿಎಂ ಮನೆ ಮುಂದೆ ಧರಣಿ

ಬಸವಜಯ ಮೃತ್ಯುಂಜಯ
Advertisement

ಹುಬ್ಬಳ್ಳಿ: ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿಯನ್ನು ಜ. 12ರೊಳಗಾಗಿ ಸರ್ಕಾರ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಜ. 13ರಂದು ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಮುಂದೆ ಧರಣಿ ಮಾಡಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಲಾಗುತ್ತಿದೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಡಿ. 22ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಮಾಡಲಾಗಿತ್ತು. ಆಗ ಭರವಸೆ ನೀಡುವ ಮೂಲಕ ಸರ್ಕಾರ ಹೋರಾಟವನ್ನು ಹತ್ತಿಕ್ಕಿದೆ ಎಂದರು.
ಡಿ. 29ರವರೆಗೆ ಬಸವರಾಜ ಬೊಮ್ಮಾಯಿ ಪರಿಪರಿಯಾಗಿ ಬೇಡಿಕೊಂಡು ಆಣೆ ಪ್ರಮಾಣ ಮಾಡಿ, ಗಡವು ತೆಗೆದುಕೊಂಡಿದ್ದರು. ಅಂದು ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗುತ್ತದೆ ಎಂದು ಕನಸು ಇಟ್ಟುಕೊಂಡಿದ್ದೇವು. ಆದರೆ ಸಚಿವ ಸಂಪುಟವನ್ನು ನಡೆಸಿ ಹೊಸದಾಗಿ ೨ಡಿ ರಚನೆ ಮಾಡುವುದಾಗಿ ಸಿಎಂ ಕಾನೂನು ಸಚಿವರಿಂದ ಹೇಳಿಸಿದ್ದರು. ಡಿ. 29ರ ನಿರ್ಣಯ ಅಸ್ಪಷ್ಟತೆ ಇದೆ. ಡಿ ಗ್ರೂಪನ್ನು ಹೊಸದಾಗಿ ರಚನೆ ಮಾಡಲು ಸಾಧ್ಯವಿಲ್ಲ. ಈ ಸಂಬಂಧ ಕಾನೂನು ತಜ್ಞರ ಸಲಹೆ ಪಡೆದುಕೊಳ್ಳಲಾಗಿದೆ. ಯಾವಾಗ ನೀತಿ ಸಂಹಿತೆ ಬರುತ್ತದೆ ಗೊತ್ತಿಲ್ಲ, ಆದ್ದರಿಂದ ಜನವರಿ 12ರ ವರೆಗೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡಲೇಬೇಕು ಎಂದು ಒತ್ತಾಯಿಸಿದರು.