ಯುವಕರಿಗೆ ಅವಕಾಶ ಮತ್ತು ಪ್ರೇರಣೆ ದೊರೆಯಲಿದೆ: ಸಿಎಂ ಬೊಮ್ಮಾಯಿ

ಸಿಎಂ
Advertisement

ಹುಬ್ಬಳ್ಳಿ: ಜನವರಿ 12 ರಂದು ನಡೆಯಿರುವ ರಾಷ್ಟ್ರೀಯ ಯುವಜನೋತ್ಸದಲ್ಲಿ ಪ್ರಧಾನಮಂತ್ರಿಗಳು ಭಾಗವಹಿಸುವುದರಿಂದ ಈ ಭಾಗದ ಯುವಕರಿಗೆ ಅವಕಾಶ ಹಾಗೂ ಪ್ರೇರಣೆ ನೀಡಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರಿ ಇಂದು ಹುಬ್ಬಳ್ಳಿಯಲ್ಲಿ ಮಾಧ್ಯದವರೊಂದಿಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ 28 ರಾಜ್ಯಗಳಿಂದ ಯುವಕರ ತಂಡ ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಂದ ಬರುತ್ತಿದ್ದಾರೆ.ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ವಾರ ನಡೆಯಲಿರುವ ಕಾರ್ಯಕ್ರಮ ದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡೆ ಗಳು ನಡೆಯಲಿವೆ. ಪ್ರಥಮ ಬಾರಿಗೆ ರಾಷ್ಟ್ರೀಯ ಯುವಜನ ಮೇಳ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವುದು ನಮಗೆಲ್ಲಾ ಸಂತೋಷ ತಂದಿದೆ. ಎಲ್ಲಾ ರಂಗದಲ್ಲಿ ಯುವಕರು ಮುಂದೆ ಬರಲು ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.
ಜನಸಂಖ್ಯೆ ನಮ್ಮ ಆಸ್ತಿ
ಜನಸಂಖ್ಯೆ ಎನ್ನುವುದು ಭಾರವಲ್ಲ. ಇದು ನಮ್ಮ ಆಸ್ತಿ ಎಂದು ಪ್ರಧಾನಿಗಳು ಪರಿಗಣಿಸಿದ್ದಾರೆ. ಶೇ 46 ರಷ್ಟು ಯುವಜನರಿರುವ ದೇಶದಲ್ಲಿ ಯುವಕರಿಂದಲೇ ದೇಶದ ಭವಿಷ್ಯ ನಿರ್ಮಾಣ ಮಾಡಬಹುದು ಎಂದು ಹಲವಾರು ಕಾರ್ಯಕ್ರಮ ರೂಪಿಸಲಾಗಿದೆ. ನೂತನ ಶಿಕ್ಷಣ ನೀತಿ, ಮುದ್ರಾ, ಆತ್ಮನಿರ್ಭರ್ ಭಾರತ್ ನಂತಹ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಗಳ ಆಗಮನದಿಂದ ಸ್ಫೂರ್ತಿ ದೊರೆಯಲಿದೆ. ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರೋಡ್ ಶೋ ಇರುವುದಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರಧಾನಿಗಳು ಅದಕ್ಕೆ ಸ್ಪಂದಿಸುತ್ತಾರೆ ಎಂದರು.
ತನಿಖೆಯಲ್ಲಿ ಸತ್ಯ ಹೊರಬರಲಿದೆ
ಸ್ಟಾಂಟ್ರೋ ರವಿ ಇಪ್ಪತ್ತು ವರ್ಷಗಳ ಇತಿಹಾಸವಿದೆ. ಯಾವ ಸರ್ಕಾರಗಳಿತ್ತು, ಯಾರ ಸಂಬಂಧ ವಿತ್ತು, ಆಸ್ತಿಪಾಸ್ತಿ ಜಪ್ತಿ ಮಾಡುವುದು ಎಲ್ಲಾ ರೀತಿಯ ತನಿಖೆ ಮಾಡಲು ಆದೇಶ ಮಾಡಲಾಗಿದೆ. ತನಿಖೆಯಲ್ಲಿ ಸತ್ಯ ಹೊರ ಬರಲಿದೆ ಎಂದರು.
ಅಂತಿಮ ವರದಿ ಬಂದ ನಂತರ ಸ್ಪಷ್ಟ ತೆ
ಪಂಚಮಸಾಲಿ ಮೀಸಲಾತಿ ಬಗ್ಗೆ ಸ್ವಾಮೀಜಿಗಳು ಗಡುವು ನೀಡಿರುವ ಬಗ್ಗೆ ಮಾತನಾಡಿ ಈಗಾಗಲೇ ಪ್ರವರ್ಗ 2 ಕ್ಕೆ ಬರಬೇಕಿರುವ ಸಮುದಾಯಗಳಿಗೆ ಮೊದಲ ನಿರ್ಣಯ ಕೈಗೊಂಡಿದೆ. ಬರುವ ದಿನಗಳಲ್ಲಿ ಪ್ರಮಾಣ ಎಷ್ಟು ಹೆಚ್ಚಾಗುತ್ತದೆ ಎನ್ನುವುದು ಅಂತಿಮ ವರದಿ ಬಂದ ನಂತರ ತಿಳಿಯಲಿದೆ. ಸಂವಿಧಾನಬದ್ಧವಾಗಿ ಹಿಂದುಳಿದ ವರ್ಗಗಳ ಆಯೋಗದ ವರದಿಯ ಮೇಲೆ ತೀರ್ಮಾನವಾಗುತ್ತದೆ. ಅದನ್ನು ಶೀಘ್ರವಾಗಿ ಸಲ್ಲಿಸಲು ಸೂಚಿಸಿದ್ದು. ಅದು ಬಂದ ನಂತರ ಸ್ಪಷ್ಟತೆ ದೊರೆಯಲಿದೆ ಎಂದರು.
ತೀರುವಳಿ ಪಡೆಯಲಾಗುವುದು
ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಸ್ಪಷ್ಟತೆ ಕೇಳುವುದು ಸಾಮಾನ್ಯ, ಅವುಗಳಿಗೆ ನಮ್ಮ ಬಳಿ ಪರಿಹಾರವಿದೆ. ಕೂಡಲೇ ಅವುಗಳಿಗೆ ಉತ್ತರ ನೀಡಿ ಪರಿಸರ ಇಲಾಖೆಯ ತೀರುವಳಿ ಪಡೆಯಲಾಗುವುದು ಎಂದರು.
ನಮ್ಮ ನಡೆ, ನಿಲುವುಗಳನ್ನು ಚುನಾವಣೆ ಒರೆಗೆ ಹಚ್ಚುತ್ತದೆ
ಸಿದ್ದರಾಮಯ್ಯ ಅವರು ಕೋಲಾರ ದಿಂದ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ಅವರ ಆಯ್ಕೆ. ಪ್ರತಿ ರಾಜಕಾರಣಿ, ನಾಯಕನ ನಡೆ ಚುನಾವಣೆಯಲ್ಲಿ ತಿಳಿಯುತ್ತದೆ. ನಮ್ಮ ನಡೆ, ನಿಲುವು, ನಿರ್ಧಾರಗಳನ್ನು ಚುನಾವಣೆ ಓರೆಗೆ ಹಚ್ಚುತ್ತದೆ. ಕೋಲಾರ ಆಯ್ಕೆ ಬಗ್ಗೆ ವ್ಯಾಖ್ಯಾನಿಸುವುದಿಲ್ಲ. ಇದು ಅವರ ಹಾಗೂ ಅವರ ಪಕ್ಷದ ನಿರ್ಧಾರ. ಈ ಬಗ್ಗೆ ಕೋಲಾರದ ಜನತೆ ತೀರ್ಮಾನ ಮಾಡಲಿದ್ದಾರೆ ಎಂದರು.
ಜನರಿಗೆ ಸತ್ಯ ತಿಳಿದಿದೆ
ಪೇ ಸಿಎಂ, ಸ್ಕ್ಯಾಮ್ ಸಂಕ್ರಾಂತಿಗೆ ಜನರಿಂದ ಸ್ಪಂದನೆ, ಬೆಂಬಲ ಸಿಗುವುದಿಲ್ಲ. ಜನರಿಗೆ ಸತ್ಯ ಯಾವುದೆಂದು ತಿಳಿದಿದೆ. ಸ್ಟಾಂಟ್ರೋ ರವಿ ಅವರ ಕಾಲದಲ್ಲಿ ಜೈಲಿನಿಂದ ಬಿಡುಗಡೆ ಯಾಗಿದ್ದು ಇದಕ್ಕೆ ಅವರೇ ಉತ್ತರ ನೀಡಬೇಕು ಎಂದರು.