ಜಾಹೀರಾತಿಗೆ ಸರ್ಕಾರಿ ಹಣ ದುರ್ಬಳಕೆ 163 ಕೋಟಿ ವಾಪಸ್‌ಗೆ ಗಡುವು

ಆಪ್
Advertisement

ನವದೆಹಲಿ: ರಾಜಕೀಯ ಜಾಹೀರಾತುಗಳಿಗೆ ಮಾಡಿದ 163.62 ಕೋಟಿ ರೂ.ಗಳನ್ನು ಹತ್ತು ದಿನಗಳ ಒಳಗೆ ಪಾವತಿಸಲೇಬೇಕು ಇಲ್ಲದಿದ್ದರೆ ನಿಮ್ಮ ಕಚೇರಿಯನ್ನು ಸೀಲ್ ಮಾಡುವುದಾಗಿ ದೆಹಲಿ ಸರ್ಕಾರಕ್ಕೆ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ ಎಚ್ಚರಿಕೆ ನೀಡಿದೆ.
ಆಪ್ ಸರ್ಕಾರದ ವಿರುದ್ಧವೇ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ ಈ ಎಚ್ಚರಿಕೆಯ ನೋಟೀಸ್ ನೀಡಿರುವುದು ಇದೀಗ ರಾಜಕೀಯ ಹಗ್ಗ ಜಗ್ಗಾಟಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ. ಆಪ್‍ನವರು 2017ರ ಮಾರ್ಚ್ 31ರವರೆಗೆ ಜಾಹೀರಾತಿಗಾಗಿ 99.31 ಕೋಟಿ ಖರ್ಚು ಮಾಡಿದ್ದರು ಎನ್ನಲಾಗಿದೆ. ಆ ಹಣವನ್ನು ಪಾವತಿಸದಿರುವುದಕ್ಕೆ 64.31 ಕೋಟಿ ರೂ.ಗಳ ಬಡ್ಡಿ ಸೇರಿಸಿ 163 ಕೋಟಿ ಪಾವತಿಸುವಂತೆ ಈಗಾಗಲೇ ಹಲವಾರು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಮುಖ್ಯಮಂತ್ರಿ ಅರವಿಂದ ಕೆಜ್ರೀವಾಲ್ ಕ್ಯಾರೆ ಅನ್ನದ ಹಿನ್ನಲೆಯಲ್ಲಿ ಅಂತಿಮ ನೋಟೀಸ್ ಜಾರಿ ಮಾಡಿ ಈ ಎಚ್ಚರಿಕೆ ನೀಡಲಾಗಿದೆ. ಆದ್ರೆ ಎಎಪಿ ಈ ರೀತಿಯ ಆದೇಶಗಳನ್ನು ಹೊರಡಿಸಲು ರಾಜ್ಯಪಾಲರಿಗೆ ಅಧಿಕಾರವಿಲ್ಲ. ರಾಜ್ಯಪಾಲರ ನಿರ್ದೇಶನಗಳು ಕಾನೂನಿನ ದೃಷ್ಟಿಯಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದೆ.