ಸಂವಿಧಾನದಲ್ಲಿ ಇಲ್ಲದಿದ್ದರೂ ಮೇಲ್ಜಾತಿಯವರಿಗೆ ಶೇ. 10ರಷ್ಟು ಮೀಸಲಾತಿ

ಸಿದ್ದು
Advertisement

ರಾಯಚೂರು: ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿವರೆಗೆ ಮೀಸಲಾತಿ ಇರಲೇಬೇಕು. ಜಾತಿ ವ್ಯವಸ್ಥೆ ಹೋದರೆ, ಮೀಸಲಾತಿ ಬೇಡ. ಆದರೆ, ಬಿಜೆಪಿಯವರು ಮೀಸಲಾತಿ
ಅಪ್ರಸ್ತುತಗೊಳಿಸಲು ಹೊರಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಆರೋಪಿಸಿದರು.
ತಿಂಥಣಿಯಲ್ಲಿರುವ ಕನಕ ಗುರುಪೀಠದಲ್ಲಿ ಹಾಲುಮತ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕವಾಗಿ ಯಾರು ಹಿಂದುಳಿದಿದ್ದಾರೋ ಅವರಿಗೆ ಮೀಸಲಾತಿ ನೀಡಬೇಕು. ಆದರೆ, ನರೇಂದ್ರ ಮೋದಿಯವರು ಶೇ. 10ರಷ್ಟು ಮೀಸಲಾತಿಯನ್ನು ನೀಡಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಅಂದರೆ, ಮುಂದುವರೆದ ಜನಾಂಗದವರಿಗೆ ಸಾಮಾನ್ಯ ಕೆಟಗರಿಯಲ್ಲಿ ಬರುವವರಿಗೆ ಶೇ. 10ರಷ್ಟು ಮೀಸಲಾತಿ ನೀಡಿದ್ದಾರೆ ಎಂದು ಆರೋಪಿಸಿದರು.
ಆರ್ಥಿವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂಬುವುದು ಸಂವಿಧಾನದಲ್ಲಿ ತಿಳಿಸಿಲ್ಲ. ಮೋದಿಯವರು ಮೇಲ್ಜಾತಿಯವರನ್ನು ಖುಷಿಪಡಿಸಲು ನೀಡಿದ್ದಾರೆ. ನಾವ್ಯಾರೂ
ಕೇಳಲಿಲ್ಲ. ವಿರೋಧವನ್ನು ವ್ಯಕ್ತಪಡಿಸಿಲ್ಲ. ಈಗ ಎಲ್ಲರೂ ಮೀಸಲಾತಿ ಕೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲವನ್ನೂ ಖಾಸಗೀಕರಣಗೊಳಿಸಲು ಮುಂದಾಗಿದ್ದಾರೆ. ಇದಕ್ಕಾಗಿ
ಹೊರಗುತ್ತಿಗೆಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಯಾವುದೇ ಮೀಸಲಾತಿ ದೊರಕುವುದಿಲ್ಲ. ಕೇಂದ್ರ ಸರ್ಕಾರ ಮೀಸಲಾತಿ ಕಡಿಮೆ ಮಾಡುತ್ತಿದೆ ಎಂದು ಆರೋಪಿಸಿದರು.