ಐಷಾರಾಮಿ ಗಂಗಾ ವಿಲಾಸ್‌ ಕ್ರೂಸ್‌ ಉದ್ಘಾಟಿಸಿದ ಪ್ರಧಾನಿ ಮೋದಿ

ಗಂಗಾ ವಿಲಾಸ
Advertisement

ಪ್ರಧಾನಿ ಮೋದಿ ಶುಕ್ರವಾರ ವಾರಾಣಸಿಯಲ್ಲಿ ಎಂ.ವಿ. ಗಂಗಾ ವಿಲಾಸ ವಿಹಾರವನ್ನು ಉದ್ಘಾಟನೆ ಮಾಡಿದ್ದಾರೆ. ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿರುವ ಜಗತ್ತಿನ ಅತಿ ಉದ್ದದ ಎಂ.ವಿ. ವಿಲಾಸ್‌ ಗಂಗಾ ವಿಲಾಸ್‌ ಕ್ರೂಸ್‌ ವಾರಾಣಸಿಯಿಂದ ಬಾಂಗ್ಲಾ ಮೂಲಕ ಅಸ್ಸಾಂನ ದಿಬ್ರುಗಢ ತಲುಪಲಿದೆ. ಬೆಳಗ್ಗೆ 10.30 ಕ್ಕೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಟೆಂಟ್‌ ಸಿಟಿಯನ್ನು ಉದ್ಘಾಟನೆ ಮಾಡಿದ್ದಾರೆ. ಹಾಗೂ, 1000 ಕೋಟಿ ರೂ. ಗಿಂತ ಹೆಚ್ಚಿನ ಮೊತ್ತದ ಇತರ ಹಲವು ಒಳನಾಡು ಜಲಮಾರ್ಗ ಯೋಜನೆಗಳಿಗೆ ಸಹ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಪ್ರಧಾನಿ ಮೋದಿ ಜತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.
ಉತ್ತರ ಪ್ರದೇಶದ ವಾರಾಣಸಿಯಿಂದ ಗಂಗಾ ವಿಲಾಸ್ ಕ್ರೂಸ್‌ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು 51 ದಿನಗಳಲ್ಲಿ ಸುಮಾರು 3,200 ಕಿಮೀ ಪ್ರಯಾಣಿಸಿ ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢವನ್ನು ತಲುಪುತ್ತದೆ. ಭಾರತ ಮತ್ತು ಬಾಂಗ್ಲಾದೇಶದ 27 ನದಿ ವ್ಯವಸ್ಥೆಗಳ ಮೂಲಕ ಗಂಗಾ ವಿಲಾಸ್‌ ಸಾಗುತ್ತದೆ. ಎಂವಿ ಗಂಗಾ ವಿಲಾಸ್ 3 ಡೆಕ್‌ಗಳನ್ನು ಹೊಂದಿದ್ದು, ಜತೆಗೆ 36 ಪ್ರವಾಸಿಗರ ಸಾಮರ್ಥ್ಯದೊಂದಿಗೆ 18 ಸೂಟ್‌ ಸೇರಿ ಎಲ್ಲಾ ಐಷಾರಾಮಿ ಸೌಕರ್ಯಗಳನ್ನು ಹೊಂದಿದೆ.