ಕೊಹ್ಲಿ ಶತಕ – ಅಭಿಮಾನಿಗೆ ಮದುವೆ ಸಂಭ್ರಮ

Advertisement

ವಿಶ್ವ ಶ್ರೇಷ್ಟ ಕ್ರಿಕೆಟ್‌ ಆಟಗಾರ ವಿರಾಟ್‌ ಕೊಹ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ, ಶತಕಗಳ ಮೇಲೆ ಶತಕ ಸಿಡಿಸಿ ಹಳೆಯ ದಾಖಲೆಗಳನ್ನ ಪುಡಿ ಪುಡಿ ಮಾಡಿರುವ ಕೊಹ್ಲಿಯ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್‌ ಈಗ ಎಲ್ಲೆಡೆ ವೈರಲ್‌ ಆಗಿದೆ.
ವಿರಾಟ ಅಭಿಮಾನಿಯೊಬ್ಬ ಕೊಹ್ಲಿ 71ನೇ ಶತಕ ಬಾರಿಸುವವರೆಗೂ ತಾನು ಮದುವೆ ಆಗುವುದಿಲ್ಲ ಎಂಬ ಬರಹವುಳ್ಳ ಫಲಕವನ್ನು ಕ್ರಿಡಾಂಗಣದಲ್ಲಿ ಪ್ರದರ್ಶನ ಮಾಡಿದ್ದ ಸದ್ಯ ಕೊಹ್ಲಿ 74 ಶತಕ ಸಿಡಿಸಿದ್ದು ಹಳೆಯ ಅಭಿಮಾನಿಯ ಸಂತಸದ ಪೋಸ್ಟ್‌ ವೈರಲ್‌ ಆಗಿದೆ.
ಅಮನ್‌ ಅಗರವಾಲ್‌ ತನ್ನ ನೆಚ್ಚಿನ ಕ್ರಿಕೆಟಿಗನು 71 ನೇ ಶತಕ ಮಾಡುವವರೆಗೂ ಮದುವೆ ಆಗುವುದಿಲ್ಲ ಎಂದಿದ್ದ ಈಗ ಕೊಹ್ಲಿಯ 74ನೇ ಶತಕ ಆಗಿರುವದರಿಂದ ತಮ್ಮ ಮದುವೆಯ ಉಡುಪಿನಲ್ಲಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. “ನಾನು 71 ನೇ ಶತಕವನ್ನು ಕೇಳಿದೆ ಆದರೆ ಅವರು ನನ್ನ ವಿಶೇಷ ದಿನದಂದು 74 ನೇ ಶತಕವನ್ನು ಗಳಿಸಿದರು,” ಎಂದು ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.