ಐಐಟಿ ಜಾಗೆ ಕೈಗಾರಿಕೋದ್ಯಮಗಳಿಗೆ ನೀಡಲು ಬಿಡುವುದಿಲ್ಲ: ರೇವಣ್ಣ

Advertisement

ಹಾಸನ: ಜಿಲ್ಲೆಗೆ ಐಐಟಿ ತರುವುದು ಮಾಜಿ ಪ್ರಧಾನಿ ದೇವೇಗೌಡ ಅವರ ಕನಸು. ಇದಕ್ಕಾಗಿ 1024 ಎಕರೆ ಜಾಗವನ್ನು 20 ವರ್ಷಗಳ ಹಿಂದಿಯೇ ಮೀಸಲಿಡಲಾಗಿದೆ. ಐಐಟಿಗೆ ಮೀಸಲಿಟ್ಟ ಜಾಗವನ್ನು ಖಾಸಗಿ ಅವರಿಗೆ ಪರಭಾರೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಶಾಸಕ ಎಚ್‌.ಡಿ. ರೇವಣ್ಣ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಜಿಲ್ಲೆಗೆ ಬಹಳಷ್ಟು ಅನ್ಯಾಯವಾಗಿದೆ. ಈಗ ಐಐಟಿಗೆ ಮೀಸಲಿಟ್ಟ ಜಾಗವನ್ನು ಕೈಗಾರಿಕೋದ್ಯಮಗಳಿಗೆ ನೀಡಲು ಸರ್ಕಾರ ನಿರ್ಧಾರ ಮಾಡಿದ್ದು, ಇದನ್ನು ಈ ಕೂಡಲೇ ಕೈಬಿಡಬೇಕು. ಒಂದು ವೇಳೆ ರಾಜ್ಯ ಸರ್ಕಾರ ಜಿಲ್ಲೆಯ ಜನತೆ ಆಶಯಕ್ಕೆ ವಿರುದ್ಧವಾಗಿ ಕ್ರಮಕೈಗೊಂಡರೆ ಜಿಲ್ಲೆಯ ಶಾಸಕರು, ಲೋಕಸಭಾ ಸದಸ್ಯರು ಮತ್ತು ಚುನಾಯಿತ ಪ್ರತಿನಿಧಿಗಳು ವಿಧಾನಸೌಧ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.