ಪ್ರಾಮಾಣಿಕವಾಗಿ ಭಾರತಾಂಬೆ ಸೇವೆ ಮಾಡಿ; ಕೇಂದ್ರ ಸಚಿವ ಭಗವಂತ ಖೂಬಾ

Advertisement

ಹುಬ್ಬಳ್ಳಿ: ಭಾರತ ಅಮೃತಮಹೋತ್ಸವ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಪಾರದರ್ಶಕತೆ ನಿಯಮದಡಿ ನೇಮಕಾತಿಗೊಂಡ ನೀವು ಭಾರತಾಂಬೆಯ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿ ಎಂದು ಕೇಂದ್ರ ಪುನರ್ ಬಳಕೆ ಇಂಧನ ಮತ್ತು ರಾಸಾಯನಿಕ ರಾಜ್ಯ ಸಚಿವ ಭಗವಂತ ಖೂಬಾ ಕಿವಿಮಾತು ಹೇಳಿದರು.

ಇಲ್ಲಿನ ಕೆ ಎಲ್ಇ ತಾಂತ್ರಿಕ ವಿವಿಯ ಬಯೋಟೆಕ್ನಾಲಜಿ ವಿಭಾಗದ ಸಭಾಂಗಣದಲ್ಲಿ ಆಯೋಜಿಸಿದ್ದ ರೋಜಗಾರ ಮೇಳ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಹತ್ತು ಲಕ್ಷ ಸರ್ಕಾರಿ ಉದ್ಯೊಗ ನೇಮಕಾತಿಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದು, ಕ್ರಾಂತಿಕಾರಿ ಹೆಜ್ಜೆಯಾಗಿದೆ. ಕಳೆದ ವರ್ಷ ಅಕ್ಟೋಬರ್, ನವೆಂಬರ್ ನಲ್ಲಿ ರೋಜಗಾರ ಮೇಳ ಆಯೋಜಿಸಲಾಗಿತ್ತು. ಇದು 3 ನೇ ರೋಜಗಾರ ಮೇಳವಾಗಿದೆ. ಇಂದು ದೇಶವ್ಯಾಪಿ 71000 ಜನರಿಗೆ ಉದ್ಯೋಗ ನೇಮಕಾತಿ ಪತ್ರ ವಿತರಣೆ ನಡೆಯುತ್ತಿದೆ. ಇಲ್ಲಿ 206 ಜನರಿಗೆ ನೇಮಕಾತಿ ಪತ್ರ ವಿತರಿಸಲಾಗುತ್ತಿದೆ ಎಂದರು.
ನೇಮಕಗೊಂಡವರೆಲ್ಲ ಪ್ರಾಮಾಣಿಕವಾಗಿ ಸಾರ್ವಜನಿಕರಿಗೆ ಸೇವೆ ನೀಡಬೇಕು. ಮುಂದಿನ 25 ವರ್ಷ ಭಾರತಾಂಬೆಯ ಸೇವೆ ಮಾಡಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದ ಫಲವಾಗಿ ಭಾರತ ಈಗ ಜಾಗತಿಕ ಮಟ್ಟದಲ್ಲಿ ಸದೃಢ ಅರ್ಥಿಕ ಶಕ್ತಿ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಡರ ಮಾತನಾಡಿ, ಬೃಹತ್ ಸಂಖ್ಯೆಯ ಹುದ್ದೆಗಳಿಗೆ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ಸವಾಲಿನದ್ದು, ಅದನ್ನು ಸಮರ್ಥವಾಗಿ ಅನುಸರಿಸಿ ದೇಶದ ಲಕ್ಷಾಂತರ ಯುವಕರಿಗೆ ಉದ್ಯೋಗ ಕಲ್ಪಿಸುವ ಕಾರ್ಯ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ ಎಂದರು.

ಬರೀ ಸರ್ಕಾರಿ ವಲಯದ ಉದ್ಯೋಗಕ್ಕಷ್ಟೇ ಅಲ್ಲದೇ
ವಲಯ, ಕೈಗಾರಿಕೆ ಕ್ಷೇತ್ರದಕ್ಕೆ ವ್ಯಾಪಕ ಪ್ರೋತ್ಸಾಹ, ಸೌಕರ್ಯ ನೀಡಿದ್ದಾರೆ. ಪರಿಣಾಮ ಅಲ್ಲಿಯೂ ಉದ್ಯೋಗ ಸೃಷ್ಟಿಯಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತ ಅರ್ಥಿಕತೆಯಲ್ಲಿ 5 ಬಲಿಷ್ಠ ರಾಷ್ಟ್ರವಾಗಲು ಕಾರಣವಾಗಿದೆ ಎಂದರು.
ಪ್ರಧಾನಿ ಮೋದಿ ಅವರು ಜಾಗತಿಕ ನಾಯಕ ಎಂದು ಬಣ್ಣಿಸಿದರು.

ಆದಾಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತರಾದ ಮನೋಜ್ ಜೋಶಿ, ವಂದನಾ ಸಾಗರ್, ಚೈತಾಲಿ ಕಣ್ಮಯಿ ಇದ್ದರು.