ಸರ್ಕಾರಿ ನೌಕರಿ ಬರೀ ನೌಕರಿಯಲ್ಲ ದೇಶದ ಜನರ ಸೇವೆ ಮಾಡಲು ಒದಗಿದ ಅವಕಾಶ: ಪ್ರಧಾನಿ

Advertisement

ಹುಬ್ಬಳ್ಳಿ : ಸರ್ಕಾರಿ ನೌಕರಿ ಎಂಬುದು ಬರೀ ನೌಕರಿ ಅಲ್ಲ. ಅದು ಈ ದೇಶದ ಜನರ ಸೇವೆ ಮಾಡಲು ಒದಗಿದ ಅವಕಾಶ ಎಂದು ಪರಿಭಾವಿಸಿ. ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವರ್ಚುವಲ್ ವೇದಿಕೆ ಮೂಲಕ ರೋಜಗಾರ್ ಮೇಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸರ್ಕಾರಿ ಉದ್ಯೋಗ ಪಡೆದ ಹೆಮ್ಮೆಯ ಜೊತೆಗೆ ಸೇವಾ ಭಾವನೆಯೂ ಮುಖ್ಯ. ನೀವು ದೇಶದ ಜನರ ಸೇವೆ ಮಾಡುವ ಜೊತೆಗೆ ನೀವು ಬೆಳೆಯಬೇಕು. ದೇಶವನ್ನು ಬೆಳೆಸಬೇಕು ಎಂದರು.
ಪಾರದರ್ಶಕ ನಿಯಮದಡಿ ಕಟ್ಟುನಿಟ್ಟಿನ ನಿಯಮಗಳ ಅನ್ವಯ ನೇಮಕ ಪ್ರಕ್ರಿಯೆ ನಡೆದಿದ್ಸರ ಫಲವಾಗಿ ದೇಶದ ಬಡವರ, ಶ್ರೀಸಾಮಾನ್ಯರ ಮಕ್ಕಳು ಸರ್ಕಾರಿ ನೌಕರಿ ಪಡೆಯುಚ ಕನಸು ನನಸಾಗಿದೆ. ಅರ್ಹತೆ ಆಧಾರದ ಮೇಲೆ ಉದ್ಯೋಗ ಪಡೆದ ನೀವು ಬದುಕಿನುದ್ದಕ್ಕೂ ಜನಪರ ಕಾಳಜಿ ಗುಣ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಉದ್ಯೋಗ ಪಡೆದಾಕ್ಷಣ ಕಲಿಕೆ ನಿಲ್ಲಬಾರದು. ನಿರಂತರ ಕಲಿಕೆ ಮುಂದುವರಿಸಬೇಕು ಎಂದೂ ಸಲಹೆ ನೀಡಿದರು.
ಇದೇ ವೇಳೆ ಅವರು ನೇಮಕಗೊಂಡ ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ತೆಲಂಗಾಣ , ಬಿಹಾರ, ಈಶಾನ್ಯ ರಾಜ್ಯದ ಯುವಕರೊಂದಿಗೆ ಸಂವಾದ ನಡೆಸಿದರು.
ನೇಮಕಾತಿ ಪತ್ರ ವಿತರಣೆ
ಹುಬ್ಬಳ್ಳಿಯಲ್ಲಿ ವರ್ಚುವಲ್ ವೇದಿಕೆಯ ಮೂಲಕ ಪಾಲ್ಗೊಂಡ ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು 206 ಜನರಿಗೆ ನೇಮಕಾತಿ ಪತ್ರ ವಿತರಿಸಿದರು.