ಸಂಸದ ಸಾಂಸ್ಕೃತಿಕ ಮಹೋತ್ಸವ ಗಾಳಿಪಟ ಉತ್ಸವದಲ್ಲಿಂದೇನು?

Advertisement

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರಸ್ತುತಪಡಿಸುತ್ತಿರುವ `ಸಂಸದ ಸಾಂಸ್ಕೃತಿಕ ಮಹೋತ್ಸವ’ದಡಿ ನಗರದ ಜೆ.ಕೆ.ಸ್ಕೂಲ್ ಮಾರ್ಗದ ವೆಂಕಟರಮಣ ದೇವಸ್ಥಾನದ ಎದುರುಗಡೆ ಬಯಲಿನಲ್ಲಿ ನಡೆಯುತ್ತಿರುವ ಹುಬ್ಬಳ್ಳಿ ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವದ ೨ನೇ ದಿನವಾದ ರವಿವಾರ

ಹಲವು ಕಾರ್ಯಕ್ರಮ ನಡೆಯಲಿವೆ. ಉಚಿತ ಪ್ರವೇಶವಿದ್ದು, ಸಾರ್ವಜನಿಕರು ವೀಕ್ಷಿಸಬಹುದು. ಮೊದಲ ದಿನವಾದ ಶನಿವಾರ ಸಾವಿರಾರು ಜನರು ವೀಕ್ಷಣೆ ಮಾಡಿದ್ದು, ರವಿವಾರ ರಜೆ ದಿನವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ಭೇಟಿ ನೀಡುವ ನಿರೀಕ್ಷೆ ಇದೆ.

ಬೆಳಿಗ್ಗೆ ೯.೩೦ಕ್ಕೆ ಗಾಳಿಪಟ ಹಾರಾಟ ಪ್ರದರ್ಶನ, ೧೨.೩೦ಕ್ಕೆ ಮಕ್ಕಳು ಮತ್ತು ಸಾರ್ವಜನಿಕರಿಗಾಗಿ ದೇಸಿ ಕ್ರೀಡೆಗಳು, ಸಂಜೆ ೭ರಿಂದ ಸಂಗೀತ ಕಾರ್ಯಕ್ರಮ ನಡೆಯಲಿವೆ. ಭಾರತೀಯ ಚಲನಚಿತ್ರದ ಹಿನ್ನೆಲೆ ಗಾಯಕಿ, ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಹಾಡಿರುವ, ಹಂಸಲೇಖಾ, ಗುರುಕಿರಣ್, ವಿ. ಹರಿಕೃಷ್ಣ, ಮನೋ ಮೂರ್ತಿ, ಅರ್ಜುನ್ ಜನ್ಯ ಮೊದಲಾದ ಎಲ್ಲ ಪ್ರಮುಖ ಕನ್ನಡ ಸಂಗೀತ ನಿರ್ದೇಶಕರ ಜೊತೆಯಲ್ಲಿ ಗಾಯಕಿಯಾಗಿ ಪ್ರಸಿದ್ದರಾಗಿರುವ ಅನುರಾಧ ಭಟ್ ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವ ರಂಗಭೂಮಿ ಕಲಾವಿದ ಗಾಯಕ ವಾಸುಕಿ ವೈಭವ್ ಹಾಗೂ ಜೀ ಕನ್ನಡದ ಸರಗಮಪ ಖ್ಯಾತಿಯ ಅಶ್ವಿನ್ ಶರ್ಮಾ ಇವರ ತಂಡದಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.