ವಿಐಎಸ್ ಎಲ್ ಕಾರ್ಖಾನೆ ಮುಚ್ಚದಂತೆ ಮನವಿ

Advertisement

ಕುಷ್ಟಗಿ: ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾವತಿಯಲ್ಲಿರುವ ವಿಶ್ವೇಶ್ವರಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಬಿಜೆಪಿ ಸರ್ಕಾರ ಹುನ್ನಾರ ನಡೆಸಿ ಬಂದ್ ಮಾಡಲು ಹೊರಟಿದ್ದು ಇದರಿಂದಾಗಿ 1600ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಬಿದಿಗೆ ಬರುವಂತಹ ಸ್ಥಿತಿ ನಿರ್ಮಾಣ ಆಗಿದ್ದು ಯಾವುದೇ ಕಾರಣಕ್ಕೂ ಬಂದ್ ಮಾಡದಂತೆ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಒತ್ತಾಯಿಸಿ ವಿಐಎಸಪಿ ಕಂಟ್ರಾಕ್ಟ್ ವರ್ಕರ್ಸ್ ಯೂನಿಯನ್ ಪದಾಧಿಕಾರಿಗಳು ಕುಷ್ಟಗಿಯಲ್ಲಿ ಮಾಜಿ ಮುಖ್ಯ ಮಂತ್ರಿ ಹೆಚ್, ಡಿ, ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಿದರು.
ವಿಐಎಸಪಿ ಕಂಟ್ರಾಕ್ಟ್ ವರ್ಕರ್ಸ್ ಯೂನಿಯನ್ ಸಂಘದ ಅಧ್ಯಕ್ಷ ಸುರೇಶ ಎಚ್ ಜಿ ಮಾತನಾಡಿ ಸರ್.ಎಂ. ವಿಶ್ವೇಶ್ವರಯರವರು 1918 ರಲ್ಲಿ ಸಾರ್ವಜನಿಕ ಉದ್ಯಮವಾಗಿ ಸ್ಥಾಪಿಸಿದರು, ಎ.ಐ.ಎಸ್.ಎಲ್ 1989ರ ವರೆಗೂ ಕರ್ನಾಟಕ ರಾಜ್ಯ ಸರ್ಕಾರದ ಒಡೆತನದಲ್ಲಿತ್ತು.
ನಂತರ ದಿನಗಳು ಕಳೆದಂತೆ ವಿ.ಐ.ಎಸ್.ಎಲ್ ನ್ನು ಆಧುನಿಕರಣಗೊಳಿಸಲು ಮತ್ತು ಕಾರ್ಖಾನೆಗೆ ಅವಶ್ಯಕವಾದ ಬಂಡವಾಳ ತೊಡಗಿಸುವ ಉದ್ದೇಶದಿಂದ 1989 ರಲ್ಲಿ ಕೇಂದ್ರ ಸರ್ಕಾರದ ಒಡೆತನದ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ (ಸೈಲ್) ಅಂಗ ಸಂಸ್ಥೆಗೆ ವಹಿಸಲಾಗಿತ್ತು. ಸಂಸ್ಥೆಯವರು ಈ ಕಾರ್ಖಾನೆಗೆ ಯಾವುದೇ ಬಂಡವಾಳ ಒದಗಿಸದೆ ಇರುವದ್ರಿಂದ ನಷ್ಟದಲ್ಲಿದೆ ಎಂದು ಕಾಲಹರಣ ಮಾಡುವ ಮೂಲಕ ಕಾರ್ಖಾನೆಯನ್ನು ಬಿಜೆಪಿ ಸರ್ಕಾರದವರು ಮುಚ್ಚುವ ಹುನ್ನಾರ ನಡೆಸಿದ್ದಾರೆ
ಈ ಕಂಪನಿಯನ್ನ ನಂಬಿ ಕೆಲಸ ಮಾಡುತ್ತಿರುವ ಅದೆಷ್ಟೋ ಕೂಲಿಕಾರ್ಮಿಕರು ಮುಂದೊಂದು ದಿನ ಕೆಲಸ ಇಲ್ಲದೆ ಸಾಯುವ ಸ್ಥಿತಿ ನಿರ್ಮಾಣ ಆಗುತ್ತದೆ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಖಾನೆಗಳನ್ನು ಉಳಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಮಂಜುನಾಥ ಆರ್ ಮಾತನಾಡಿ 1998 ರಲ್ಲಿ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರು ವಿಶ್ವೇಶ್ವರಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಸಂಪೂರ್ಣ ಆಸ್ತಿಯನ್ನು ಕೇವಲ ಒಂದು ರೂಪಾಯಿಗೆ ಸ್ಟೈಲ್ ನೊಂದಿಗೆ ವಿಲೀನಗೊಳಿಸದರು. ಕಳೆದ ಮೂರು ದಶಕಗಳಿಂದ ಭಾರತೀಯ ಉಕ್ಕು ಪ್ರಾಧಿಕಾರವು ಯಾವುದೇ ಬಂಡವಾಳವನ್ನು ತೊಡಗಿಸದ ವಿ.ಐ.ಎಸ್.ಎಲ್ ಕಾರ್ಖಾನೆಯನ್ನು ನಷ್ಟದ ನೆಪವೊಡ್ಡಿ ಶಾಶ್ವತವಾಗಿ ಮುಚ್ಚಲು ದಿನಾಂಕ 16.01.2023 ರಂದು ಅಧಿಸೂಚನೆ ಹೊರಡಿಸಿದೆ.
ಸುಮಾರು 20-25 ವರ್ಷಗಳಿಂದ ಕೆಲಸ ಮಾಡುತ್ತಿದ್ದ 1600 ಗುತ್ತಿಗೆ ಕಾರ್ಮಿಕರು ಮತ್ತು ಅವರ ಕುಟುಂಬದ ಅವಲಂಬಿತರು ಸೇರಿ ಸುಮಾರು 8000 ಕ್ಕೂ ಆಧಿಕ ಜನ ಬೀದಿಗೆ ಬೀಳಲಿದ್ದಾರೆ ಎಂದರು.
ಶ್ರೀನಿವಾಸ ಮಾತನಾಡಿ ಪ್ರತಿಷ್ಟಿತ ಉಕ್ಕಿನ ಕಾರ್ಖಾನೆ ನಾಶವಾಗಿ ಭದ್ರಾವತಿ ನಗರವು ಉಕ್ಕಿನ ನಗರ ಎಂಬ ಖ್ಯಾತಿಯಿಂದ ಬೆಂಕಿಪುರ ಎಂಬ ಅಪಖ್ಯಾತಿ ಪಡೆಯುತ್ತದೆ. ಆದ್ದರಿಂದ, ದೇಶಾದ್ಯಾಂತ ಹೆಸರುವಾಸಿ ಹಾಗೂ ಇತಿಹಾಸವ ಕರ್ನಾಟಕದ ಆಸ್ತಿಯಾದ ಕಾರ್ಖಾನೆಯನ್ನು ನಂಬಿ ಬದುಕುತ್ತಿದ್ದು ಇದನ್ನು ಉಳಿಸಿದಾಗ ಮಾತ್ರ ಅದೆಷ್ಟೋ ಕುಟುಂಬಗಳಿಗೆ ಮರು ಜೀವನ ಬಂದಂತಾಗುತ್ತದೆ ಎಂದರು.
ಈ ವೇಳೆ ಶೈಲಜಾ, ನಾಗಭೂಷಣ, ಕುಮಾರಸ್ವಾಮಿ, ಉಮೇಶ, ಧನಂಜಯ, ಲಕ್ಷೀಷ, ಶಿವಮೊಗ್ಗ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ, ಅಜಿತ್ ಸೇರಿದಂತೆ ಇತರರು ಇದ್ದರು.