AI ದರ್ಶನ : ಇಮ್ಮಡಿ ಪುಲಿಕೇಶಿ ಪಾತ್ರದಲ್ಲಿ

Advertisement

ಬೆಂಗಳೂರು: ತಾಂತ್ರಿಕತೆಯ ಮಾಂತ್ರಿಕತೆ ಹಾಗೂ ಕೃತಕ ಬುದ್ಧಿಮತ್ತೆ ಬಳಸಿ ಜನಪ್ರಿಯ ಕಲಾವಿದರ ಪೋಸ್ಟರ್​ಗಳನ್ನು ವಿನ್ಯಾಸ ಮಾಡುವ ಟ್ರೆಂಡ್​ ಈಗ ಜೋರಾಗಿದೆ. ಕನ್ನಡದ ನಟ ದರ್ಶನ್ ತೂಗುದೀಪ ಅವರು ಇಮ್ಮಡಿ ಪುಲಿಕೇಶಿ ಪಾತ್ರ ಮಾಡಿದ್ರೆ ಹೇಗೆ ಕಾಣಸ್ತಾರೆ ? ಎಂದು ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದು ಕಾಣತೊಡಗಿದೆ, ಕಲ್ಪನೆಯ ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ, ಸಾಮಾಜಿಕ ಜಾಲತಾಣ ಟ್ವೀಟ್‌ರನಲ್ಲಿ ಬೆಳಗಾವಿ ಪುಟ ಎಂಬ ಅಕೌಂಟ್‌ನಿಂದ ಈ ಚಿತ್ರವನ್ನು ಹಂಚಿಕೊಂಡಿದ್ದು ದರ್ಶನ ಅವರು ಇಮ್ಮಡಿ ಪುಲಿಕೇಶಿ ಪಾತ್ರ ಮಾಡಿದ್ರೆ ಹೇಗೆ ಕಾಣಸ್ತಾರೆ ? ಇದು‌ AI ಟೂಲ್ ಬಳಸಿ ಡಿಸೈನ್ ಮಾಡಲಾಗಿದೆ ಎಂದಿದ್ದಾರೆ.