ATMSarkara ಕ್ಕೆ ಕ್ಲೀನ್ ಚಿಟ್ ಕೊಟ್ಟಕೊಳ್ಳುವ ವಿಫಲ ಪ್ರಯತ್ನ

Advertisement

ಬೆಂಗಳೂರು: ಪರಿಶಿಷ್ಟ ಪಂಗಡಕ್ಕೆ ಸೇರಬೇಕಾಗಿದ್ದ ಅಷ್ಟೊಂದು ಕೋಟಿ ಹಣ ಮುಖ್ಯಮಂತ್ರಿ ಹಾಗೂ ಸಚಿವರ ಸೂಚನೆ ಇಲ್ಲದೆ ತೆಲಂಗಾಣದ ಯಾವುದೋ ಕಂಪೆನಿಗೆ ವರ್ಗಾವಣೆ ಆಗಲು ಹೇಗೆ ಸಾಧ್ಯ? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಭ್ರಷ್ಟಾತಿ ಭ್ರಷ್ಟ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ತಮ್ಮ ಭ್ರಷ್ಟ ಸಚಿವರನ್ನು ಕಾಪಾಡಿಕೊಳ್ಳಲು ಇದೀಗ ಬೃಹನ್ನಳೆ ನಾಟಕ ಆರಂಭಿಸಿದೆ. ಪರಿಶಿಷ್ಟ ಪಂಗಡಕ್ಕೆ ಸೇರಬೇಕಾಗಿದ್ದ ಅಷ್ಟೊಂದು ಕೋಟಿ ಹಣ ಮುಖ್ಯಮಂತ್ರಿ ಹಾಗೂ ಸಚಿವರ ಸೂಚನೆ ಇಲ್ಲದೆ ತೆಲಂಗಾಣದ ಯಾವುದೋ ಕಂಪೆನಿಗೆ ವರ್ಗಾವಣೆ ಆಗಲು ಹೇಗೆ ಸಾಧ್ಯ? ಸಿಎಂ ಸಿದ್ದರಾಮಯ್ಯನವರೇ, ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದಂತೆ ನೀವು ಕೂಡ ಅದೇ ಕೆಲಸ ಮಾಡುತ್ತಿದ್ದೀರಿ. ಮೊದಲು ಆ ಕೆಲಸ ಬಿಡಿ ಈ ಹಗರಣದಲ್ಲಿ ನಿಮಗೆ ಸಿಕ್ಕಿರುವ ಪಾಲೆಷ್ಟು ಹೇಳಿ?

ವಾಲ್ಮೀಕಿ ಮಹರ್ಷಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣದ ಆರೋಪಿ ಸಚಿವ ಬಿ ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯುವ ಬದಲು, ಅಕ್ರಮ ಹಣ ವರ್ಗಾವಣೆ ಸಂಬಂಧ ಬ್ಯಾಂಕ್‌ಗಳ ಮೇಲೆ ಮತ್ತು ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಕ್ರಮ ಹಣ ವರ್ಗಾವಣೆ ಸಂಬಂಧ CBI ಗೆ ದೂರು ದಾಖಲಿಸಿದ್ದರೂ, ಸಿದ್ದರಾಮಯ್ಯ ಸರ್ಕಾರ ಮಾತ್ರ SIT, CID ತನಿಖೆ ಎಂದು ಕಾಲಹರಣ ಮಾಡಿ #ATMSarkara ಕ್ಕೆ ಕ್ಲೀನ್ ಚಿಟ್ ಕೊಟ್ಟಕೊಳ್ಳುವ ವಿಫಲ ಪ್ರಯತ್ನ ಮಾಡುತ್ತಿದೆ ಎಂದಿದೆ.