CAA ಪೋರ್ಟಲ್ ಆರಂಭ

Advertisement

ನವದೆಹಲಿ: ಭಾರತದ ಪೌರತ್ವ ನೀಡುವ ಕಾಯ್ದೆ CAA ವೆಬ್‌ಸೈಟ್ ಆರಂಭಗೊಂಡಿದೆ.
ಅರ್ಹರು ಕೇಂದ್ರ ಗೃಹ ಸಚಿವಾಲಯದ ವೆಬ್‌ಸೈಟ್‌ಗೆ ಭೇಟಿ ನೀಡಿ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ, CAA-2019 ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಜನರಿಗಾಗಿ ಸರ್ಕಾರ ಹೊಸ ಪೋರ್ಟಲ್ ಅನ್ನು ಪ್ರಾರಂಭಿಸಿದೆ, http://indiancitizenshiponline.nic.in 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆ ಪಡೆದಿತ್ತು. ಆದರೆ ಅಧಿಸೂಚನೆ ಹಾಗೂ ಜಾರಿ ವಿಳಂಬವಾಗಿತ್ತು. ಹಲವು ಬಾರಿ ಅಧಿಸೂಚನೆ ಅವಧಿ ವಿಸ್ತರಿಸಲಾಗಿತ್ತು. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, 2024ರ ಲೋಕಸಭಾ ಚುನಾವಣೆಗೂ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದ್ದರು.

ಮೊಬೈಲ್ ಅಪ್ಲಿಕೇಶನ್: ಪೋರ್ಟಲ್ ಜೊತೆಗೆ, ಅಪ್ಲಿಕೇಶನ್‌ಗಳನ್ನು ಸುಲಭಗೊಳಿಸಲು ಸರ್ಕಾರವು ಮೊಬೈಲ್ ಅಪ್ಲಿಕೇಶನ್ ‘CAA-2019’ ಅನ್ನು ಪ್ರಾರಂಭಿಸುತ್ತದೆ ಎಂದು MHA ಅಧಿಕಾರಿಗಳು ತಿಳಿಸಿದ್ದಾರೆ.