ಬೆಂಗಳೂರು: ಆರ್ಸಿಬಿ ತಂಡ 17ನೇ ಆವೃತ್ತಿಯ ಐಪಿಎಲ್ಗೂ ಮುನ್ನವೇ ಭರ್ಜರಿ ತಯಾರಿ ಆರಂಭಿಸಿವೆ. ಆರ್ಸಿಬಿ ಬೆಂಗಳೂರು ಫ್ರಾಂಚೈಸಿಗೆ ಹೊಸ ಕೋಚ್ ಒಬ್ಬರು ಆಯ್ಕೆ ಆಗಿದ್ದಾರೆ. ವಿಶ್ವಕಪ್ ಸೇರಿ 7 ಪ್ರಶಸ್ತಿ ಗೆದ್ದಿರುವ ಅನುಭವ ಹೊಂದಿರುವ ಜಿಂಬಾಬ್ವೆಯ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಆರ್ಸಿಬಿ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಈ ವಿಷಯವನ್ನು ಆರ್ಸಿಬಿ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ. ತಂಡದ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಮೈಕ್ ಹೆಸನ್ ಅವರ ಫ್ರಾಂಚೈಸಿ ಜೊತೆಗಿನ ಅಧಿಕಾರದ ಅವಧಿಯು ಆಗಸ್ಟ್ 31ಕ್ಕೆ ಮುಕ್ತಾಯಗೊಳ್ಳುತ್ತದೆ.