SBI ಈಗ ಶಿವಕುಮಾರ್‌ ಬ್ಯಾಂಕ್‌ ಆಫ್‌ ಇಂಡಿಯಾ!

Advertisement

ಬೆಂಗಳೂರು: ʻʻಪಂಚ ರಾಜ್ಯಗಳ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ಚಟುವಟಿಕೆ ಆರಂಭವಾಗಿದೆ ಎಂದು ಶಿಕಾರಿಪುರದ ಶಾಸಕ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಐಟಿ ದಾಳಿ ಕುರಿತು ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು ರಾಜ್ಯದಲ್ಲಿ ಹಣ ಸಂಗ್ರಹಿಸಿ ಆ ರಾಜ್ಯಗಳಿಗೆ ಕಳಿಸಿಕೊಡುವ ಹುನ್ನಾರ ಬಯಲಾಗಿದೆ. ಮೊನ್ನೆ 42 ಕೋಟಿ ರೂ. ಸೀಜ್ ಆಗಿತ್ತು, ನಿನ್ನೆ 45 ಕೋಟಿ ಸೀಜ್ ಆಗಿದೆ. ಎಲ್ಲರೂ ಮಾತನಾಡುವ ಹಾಗೆ ಸಾವಿರಾರು ಕೋಟಿ ಅಂತ ಹೇಳ್ತಿದ್ದಾರೆ. ಕಾಂಗ್ರೆಸ್ ಮುಖಂಡರು ಎಷ್ಟು ಕಳಿಸ್ತಿದ್ದಾರೆ ಅಂತ ಅಂದಾಜು ಸಿಗ್ತಿಲ್ಲ. ಆದರೆ ಒಂದು ವಿಷಯ ಸತ್ಯ. ರಾಜ್ಯದಲ್ಲಿ ಉತ್ತಮ ಆಡಳಿತ ಕೊಡ್ತೀವಿ, ಪಾರದರ್ಶಕ ಆಡಳಿತ ಕೊಡ್ತೀವಿ ಅಂತ ಹೇಳಿದ್ದ ಕಾಂಗ್ರೆಸ್ ಸರ್ಕಾರ ದಿನನಿತ್ಯ ಹಗಲು ದರೋಡೆಯಲ್ಲಿ ನಿರತವಾಗಿದೆʼʼ ದೇಶದಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಇದೆ. ರಾಜ್ಯದಲ್ಲಿ ಕಾಂಗ್ರೆಸ್‌ನವರು SBI ಬ್ರಾಂಚ್ ಓಪನ್ ಮಾಡಿಕೊಂಡಿದ್ದಾರೆ. SBI ಎಂದರೆ ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ ಎಂದು ಲೇವಡಿ ಮಾಡಿದ್ದಾರೆ ʻʻಡಿ.ಕೆ ಶಿವಕುಮಾರ್ ಮೂಲಕ ಬಿಬಿಎಂಪಿ ಸೇರಿದಂತೆ ಬೇರೆ ಬೇರೆ ಇಲಾಖೆಯಲ್ಲಿ ಹಣ ಸಂಗ್ರಹ ಮಾಡಿ ಬೇರೆ ಬೇರೆ ರಾಜ್ಯಗಳಿಗೆ ಹಣ ಸಾಗಿಸ್ತಿರೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದರಲ್ಲಿ ಹಿಂದೆ ಮುಂದೆ ನೋಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷದ ಮಂತ್ರಿಗಳು ಕಂಟ್ರಾಕ್ಟರ್ಸ್ ಮೂಲಕ ಹಣ ಸಂಗ್ರಹ ಮಾಡಿ ಕಳಿಸ್ತಿದ್ದಾರೆʼʼ ʻʻಡಿ.ಕೆ ಶಿವಕುಮಾರ್‌ ಸಿಎಂ ಸಿದ್ದರಾಮಯ್ಯ ಅವರು ಏನೇ ಹೇಳಲಿ. ರಾಜ್ಯದಲ್ಲಿ ಲೂಟಿ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದು ನಿಜ. ಲೂಟಿ ಮಾಡುವ ಮೂಲಕ ಬೇರೆ ರಾಜ್ಯಗಳಲ್ಲಿ ಚುನಾವಣೆ ಗೆಲ್ಲುವ ಹುನ್ನಾರ ನಡೆದಿದೆʼʼ ಎಂದು ಬೆಂಗಳೂರಿನಲ್ಲಿ ವಿಜಯೇಂದ್ರ ಹೇಳಿದರು.